ಕನ್ನಡ ಛಂದಸ್ಸು, ವ್ಯಾಕರಣಗಳ ವಿಶ್ಲೇಷಣೆಗೆಂದು ಸಿದ್ಧಪಡಿಸಿರುವ 'ಕವನ' ತಂತ್ರಾಂಶ ೧೩ ಕೋಟಿಗೂ ಅಧಿಕ ವೃತ್ತಗಳನ್ನು ಗುರುತಿಸಬಲ್ಲದು. ಇದಲ್ಲದೆ ಕನ್ನಡ ಭಾಷೆಯಲ್ಲಿ ಬಳಕೆಯಲ್ಲಿರುವ ಸಂಧಿಗಳನ್ನೂ ಹಾಗೂ ಸಂಧಿಯ ವಿಸ್ತಾರಗಳನ್ನು, ತತ್ಸಮ-ತದ್ಭವಗಳನ್ನು ಸರಾಗವಾಗಿ ನಿರ್ವಹಿಸಬಲ್ಲದು. ಹೊಸ ಛಂದಸ್ಸು ಗಳನ್ನು ಸೃಷ್ಠಿಸುವಲ್ಲಿ ಈ ತಂತ್ರಾಂಶವು ಬಹಳ ಸಹಕಾರಿಯಾಗಲಿದೆ. ಇದಲ್ಲದೆ ಆಲಂಕಾರಗಳು, ಕರ್ನಾಟಕ ಸಂಗೀತದ ರಾಗಗಳನ್ನು ವಿಮರ್ಶಿಸಬಹುದು. ಕನ್ನಡ ಭಾಷೆಯ ಕಾಗುಣಿತ ಮತ್ತೊಂದು ವಿಶೇಷವಾಗಿದೆ.
'ವ್ಯಾಕರಣ' ತಂತ್ರಾಂಶವು 'ಕವನ' ತಂತ್ರಾಂಶ ಕೆಲವು ಅಂಶಗಳನ್ನು ಹೊಂದಿದ್ದು Windows10, MS Wordನ ವಿಸ್ತರಣೆಯಾಗಿದೆ.
ಸೂಚನೆ: ಪದಗಳನ್ನು ವಿಸ್ತಾರ ಮಾಡುವಾಗ ಕೆಲವೊಮ್ಮೆ ಉತ್ತರ ಪದದ ಮೊದಲನೇ ಸ್ವರಗಳು ಅಲ್ಪ ಹಾಗು ಧೀರ್ಘ ಸ್ವರಗಳು ಅದಲುಬದಲಾಗಿ ಬರುವ ಸಾಧ್ಯತೆ ಇದ್ದು. ಗಣಕದ ಉಪಯೋಗಿಗಳು ಇದನ್ನು ಸರಿಯಾಗಿ ಗಮನಿಸಬೇಕು. ಕಾಗುಣಿತದ ಮೂಲಕ ಇದನ್ನು ಬದಲಿಸಬಹುದು. ಸಂಗೀತ ರಚನೆ ಇನ್ನೂ Beta ಮಾದರಿಯಲ್ಲಿದೆ.
Keywords: Kannada Chandassu, ಕನ್ನಡ ಛಂದಸ್ಸು, ವ್ಯಾಕರಣ, ಸಂಗೀತ, ಅಲಂಕಾರ, ತತ್ಸಮ, ತದ್ಭವ
Copyright © 2022-2026 ಬ್ರಾಹ್ಮೀ ಅಕ್ಷರ – All rights reserved.
Powered by GoDaddy